ಖ್ಯಾತ ನಿರ್ದೇಶಕ ಕೆ. ಮಹೇಶ್ ಸುಖಧರೆಯವರ ಬಹು ನಿರೀಕ್ಷಿತ ಚಿತ್ರ ಹ್ಯಾಪಿ ಬರ್ತ್ಡೇ ಅದ್ದೂರಿ ಚಿತ್ರವು ಈಗ ತೆರೆಗೆ ಸಿದ್ಧವಾಗಿದ್ದು, ಈ ವಾರ ಸೆನ್ಸಾರ್ ವೀಕ್ಷಣೆಗೆ ಹೋಗಲಿದೆ.
ಈಗಾಗಲೇ ಪ್ರೇಕ್ಷಕರು ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರವು ಈ ತಿಂಗಳಾಂತ್ಯದಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕ ನಿರ್ದೇಶಕ ಮಹೇಶ್ ಸುಖಧರೆ ತಿಳಿಸಿದ್ದಾರೆ.
ಚಿತ್ರಕ್ಕೆ ನಾಗಮಂಗಲ ಕೃಷ್ಣಮೂರ್ತಿ ಸಂಭಾಷಣೆ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಸುರೇಶ್ ಜಯಕೃಷ್ಣ ಛಾಯಾಗ್ರಹಣ, ರವಿವರ್ಮ, ಥ್ರ್ರಿಲ್ಲರ್ ಮಂಜು, ಜಾಲಿ ಸಬಾಸ್ಟಿನ್ ಸಾಹಸ, ಹರಿಕೃಷ್ಣ ಸಂಗೀತವಿದ್ದು ಈ ಚಿತ್ರವನ್ನು ಮಹೇಶ್ ಸುಖಧರೆ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.
ತಾರಾಗಣದಲ್ಲಿ ನಾಯಕನಾಗಿ ಸಚಿನ್ (ಹೊಸ ಪರಿಚಯ), ನಾಯಕಿಯಾಗಿ ಸಂಸ್ಕೃತಿ ಶೆಣೈ ಕಾಣಿಸಿಕೊಳ್ಳಲಿದ್ದು, ಪ್ರಮುಖ ಪಾತ್ರಗಳಲ್ಲಿ ಅಚ್ಯುತಕುಮಾರ್, ರವಿಕಾಳೆ, ನೀನಾಸಂ ಅಶ್ವಥ್, ಪ್ರಶಾಂತ್ ಸಿದ್ಧಿ, ರಾಜೇಶ್ ನಟರಂಗ, ಅರುಣ ಬಾಲರಾಜ್, ಅಶ್ವಿನಿ, ಸಾಧುಕೋಕಿಲ, ಚಿಕ್ಕಣ್ಣ, ಬುಲೆಟ್ ಪ್ರಕಾಶ್, ದತ್ತಾತ್ರೇಯ ಮುಂತಾದವರಿದ್ದಾರೆ.